ಶನಿಯನ್ನೇ ಕಾಡಿದ  ಪಿಪ್ಪಲಾದನ ಕಥೆ ನಿಮಗೆ ಗೊತ್ತೇ?

Jun 14, 2021 - 15:43
Jun 26, 2021 - 11:39
 0  82
ಶನಿಯನ್ನೇ ಕಾಡಿದ  ಪಿಪ್ಪಲಾದನ ಕಥೆ ನಿಮಗೆ ಗೊತ್ತೇ?

ಶಿವನು ಹಿಂದೂ ತ್ರಿಮೂರ್ತಿಗಳ ಅತ್ಯುನ್ನತ ದೇವತೆಗಳಲ್ಲಿ ಒಬ್ಬನಾಗಿದ್ದಾನೆ. ಅವನನ್ನು "ವಿಧ್ವಂಸಕ" ಎಂದು ಪ್ರಶಂಸಿಸಲಾಗುತ್ತದೆ, ಆದರೆ ಬ್ರಹ್ಮನು "ಸೃಷ್ಟಿಕರ್ತ" ಮತ್ತು ವಿಷ್ಣು "ರಕ್ಷಕ" ಆದಾಗ್ಯೂ, ಇಲ್ಲಿ ಉಲ್ಲೇಖಿಸಲಾದ "ವಿನಾಶ" ಸೃಷ್ಟಿಯ ನಾಶವಲ್ಲ ಆಂತರಿಕ ನಕಾರಾತ್ಮಕ ಮಾನವ ಲಕ್ಷಣಗಳು, ಅಪೂರ್ಣತೆಗಳು ಮತ್ತು ಭ್ರಮೆಗಳು ಮತ್ತು ಈ "ವಿನಾಶ" ಮತ್ತೆ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ, ಶಿವನನ್ನು "ರಚನಾತ್ಮಕ ವಿನಾಶಕ" ಎಂದು ಅತ್ಯುತ್ತಮವಾಗಿ ವರ್ಣಿಸಬಹುದು.

ಶಿವನ ಅನೇಕ ಅವತಾರಗಳ ವಿವರಣೆಯು ಶಿವ ಮಹಾಪುರದಲ್ಲಿ ಕಂಡುಬರುತ್ತದೆ. ಕೆಲುವೆಡೆ ಅವರ 24 ಮತ್ತು ಹಲವೆಡೆ 19 ಅವತಾರಗಳ ಉಲ್ಲೇಖವಿದೆ. ಈ ಅವತಾರಗಳನ್ನು ಶಿವನು ಒಂದೊಂದು ಉದ್ದೇಶಗಳನ್ನಿಟ್ಟು ಕೊಂಡೇ ಎತ್ತಿದ್ದು, ಇದರ  ಹಿಂದಿನ ಉದ್ದೇಶವನ್ನು ಕಥೆಗಳ ಮೂಲಕ ನಮ್ಮ ಪ್ರತಿಬಿಂಬ ಆನ್ ಲೈನ್ ಪತ್ರಿಕೆಯಲ್ಲಿ ಮಹಾದೇವನ 19 ಅವತಾರಗಳ ಜೊತೆಗೆ ಇನ್ನೂ ಹಲವಾರು ಹೊಸ ವಿಷಯಗಳನ್ನು ಪ್ರತಿನಿತ್ಯ ಓದಿ ನಿಮ್ಮ ಜ್ಞಾನವನ್ನು ವೃದ್ದಿಸಿಕೊಳ್ಳಿ

ಶನಿಯನ್ನೇ ಕಾಡಿದ  ಪಿಪ್ಪಲಾದನ ಕಥೆ ನಿಮಗೆ ಗೊತ್ತೇ...?

ಪಿಪ್ಪಲಾದʼ ಋಷಿ ದಂಪತಿಗಳಾದ ದದೀಚಿ ಮತ್ತು ಸ್ವರ್ಚಾರ ಮಗ. ಈ ಪಿಪ್ಪಲಾದ ಶನಿದೇವನನ್ನು ಬ್ರಹ್ಮದಂಡವನ್ನಿಡಿದು ಮೂರು  ಲೋಕಗಳಲ್ಲೂ ಅಟ್ಟಾಡಿಸುತ್ತಾನೆ. ಕೊನೆಗೆ ಪಿಪ್ಪಲಾದನಿಂದ ತಪ್ಪಿಸಿಕೊಳ್ಳಲಾಗದ ಶನಿ ಪಿಪ್ಪಲಾದನಲ್ಲಿ ಕ್ಷಮೆ ಕೇಳುತ್ತಾನೆ.

ಯಾರು ಈ ಪಿಪ್ಪಲಾದ ?

ಭಾರತದ ಪುರಾತನ ಋಷಿ ಮತ್ತು ಹಿಂದೂ ಸಂಪ್ರಾದಾಯದ ವಿದ್ವಾಂಸ ದದೀಚಿ  ಮತ್ತು ಸ್ವರ್ಚಾ ಋಷಿ ದಂಪತಿಗಳು ಅಧಮ್ಯ ಶಿವಭಕ್ತರು. ಪರಶಿವನು ಈ ದಂಪತಿಗಳ ಪುತ್ರನಾಗಿ ಅವತಾರವೆತ್ತಿ ಪಿಪ್ಪಲಾದನಾದ.

ವೃತಾಸುರ ಎಂಬ ಅಸುರನನ್ನು ಕೊಲ್ಲಲು ಇಂದ್ರನಿಗೆ ಸಹಾಯ ಮಾಡುವ ಸಲುವಾಗಿ ಋಷಿ ದದೀಚಿ ತನ್ನ ದೇಹತ್ಯಾಗ ಮಾಡಿ ತಮ್ಮ ಬೆನ್ನು ಮೂಳೆಗಳನ್ನು ನೀಡುತ್ತಾರೆ. ಈ ಸಮಯದಲ್ಲಿ ಋಷಿ ಪತ್ನಿ ಸ್ವರ್ಚಾ ಗರ್ಭಿಣಿಯಾಗಿರುತ್ತಾರೆ. ಗಂಡನ ಮರಣದಿಂದ ನೊಂದ ಸ್ವರ್ಚಾ ತಮ್ಮ ಹೆರಿಗೆಯ ನಂತರ ಮಗುವನ್ನು ಪಿಪ್ಪಲಾ ಮರದ ಕೆಳಗೆ ಮಲಗಿಸಿ ತಾನೂ ಪ್ರಾಣ ತ್ಯಾಗ ಮಾಡುವ ಮೂಲಕ ಪತಿಯನ್ನು ಸೇರುತ್ತಾಳೆ.

ಆ ಅನಾಥನಾದ ಪಿಪ್ಪಲಾದನನ್ನು ದದೀಚಿಯ ಸಹೋದರಿ ದಧೀಮತಿ ಬೆಳೆಸುತ್ತಾಳೆ. ಪಿಪ್ಪಲ ಮರದ ಎಲೆಗಳನ್ನು ತಿಂದು ಮತ್ತು ಚಂದ್ರದೇವನು ನೀಡಿದ ಅಮೃತವನ್ನು ಕುಡಿದು ಪಿಪ್ಪಲಾದನು ಬೆಳೆಯುತ್ತಾನೆ (ಪಿಪ್ಪಲಾದನು ಪಿಪ್ಪಲ ಮರದ ಎಲೆಗಳನ್ನು ತಿಂದು  ಬೆಳದವನಾದರಿಂದ ಅವನಿಗೆ ಪಿಪ್ಪಾಲಾದ ಎಂಬ ಹೆಸರು ಬಂದಿತು).

ಪಿಪ್ಪಲಾದನಿಗೆ ಶನಿಯ ಮೇಲೇಕೆ ಸಿಟ್ಟು?

ಪಿಪ್ಪಲಾದನು ತನ್ನ ಬಾಲ್ಯದಿಂದಲೇ ತನ್ನ ತಂದೆ-ತಾಯಿಗಳಿಂದ ದೂರವಾಗಬೇಕಾಯಿತು. ಕಾರಣ ಹುಡುಕುತ್ತಾ ಹೋದ ಪಿಪ್ಪಲಾದನಿಗೆ ಶನಿಯೇ ಕಾರಣವೆಂದು ತಿಳಿದ ನಂತರ ಸಿಟ್ಟಿನಿಂದ ತನ್ನ ಬ್ರಹ್ಮದಂಡವನ್ನಿಡಿದು ಶನಿಯನ್ನು ಹುಡುಕುತ್ತಾ ಹೋಗುತ್ತಾನೆ. ಶನಿಯು ಮೂರು ಲೋಕಗಳಲ್ಲೂ ಪಿಪ್ಪಲಾದನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಸೋತು- ಶರಣಾಗಿ ಕ್ಷಮೆಕೋರುತ್ತಾನೆ. ಕೊನೆಗೆ ಪಿಪ್ಪಲಾದ ಶನಿಗೆ ಒಂದು ಷರತ್ತಿನ ಮೇಲೆ ಕ್ಷಮೆ ನೀಡುತ್ತಾನೆ. ಆ ಷರತ್ತಿನ ಪ್ರಕಾರ ಶನಿಯು 12 ವರ್ಷಕ್ಕೂ ಕಡಿಮೆ ವಯಸ್ಸಿನ ಯಾರನ್ನೂ ಕಾಡುವಂತಿಲ್ಲ. ಹಾಗಾಗಿ, ಶನಿಯ ಪ್ರಭಾವಕ್ಕೆ ಒಳಗಾಗುವ ಜನರು ಶಿವನ ಈ ರೂಪವನ್ನು ಪ್ರಾರ್ಥಿಸಿ, ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

ಈ ಪಿಪ್ಪಲಾದ ಋಷಿಗಳ ಪ್ರಶ್ನಾ ಉಪನಿಷದ್‌” ಕೃತಿಯ ಕರ್ತೃ ಎಂದು ನಂಬಲಾಗಿದೆ. ಹತ್ತು ಮುಖ್ಯ ಉಪನಿಷದ್ಗಳಲ್ಲಿ ಪ್ರಶ್ನಾ ಉಪನಿಷದ್‌” ಕೂಡ ಒಂದು. ಅಥರ್ವವೇದದಲ್ಲಿರುವ ಪಿಪ್ಪಲಾದ ಸಂಪ್ರದಾಯ ವನ್ನು ಪ್ರಾರಂಭಿಸಿದ್ದೂ ಕೂಡ ಈ ಪಿಪ್ಪಲಾದರೇ. ಇದನ್ನು ಪಿಪ್ಪಲಾದ ಸಖ ಎಂದು ನಮೂದಿಸಲಾಗಿದೆ.

ಪ್ರಶ್ನಾ  ಉಪನಿಷದ್‌  ಕುರಿತು

ಕಬನ್‌ಧೀನ್ಕತ್ಯಾಯನ, ಭಾರ್ಗವ ವೈದರ್ಭಿ, ಕೌಸಲ್ಯ ಅಸ್ವಾಲಯನ, ಪೌರ್ಯಾಯಾನಿನ್ಗಾರ್ಗ್ಯ, ಸೈಭ್ಯ ಸತ್ಯಕಾಮ ಮತ್ತು ಸುಕೇಸನ್ಭಾರಧ್ವಜ ಎಂಬ ಆರು ಋಷಿಗಳು ಪಿಪ್ಪಲಾದನಲ್ಲಿ ಜೀವನ ಉದ್ದೇಶದ ಕುರಿತು ವಿವರಿಸಲು ಕೇಳುತ್ತಾರೆ. ಅವರು ವರ್ಷದವರೆಗೆ ಕಠಿಣ ಮಾರ್ಗಗಳನ್ನು ಪಾಲನೆ ಮಾಡಿ ಆರು ಪ್ರಶ್ನೆಗಳಿಗೆ ಪಡೆದ ಉತ್ತರಗಳೇ ನಂತರ ಈ ಪ್ರಶ್ನಾ ಉಪನಿಷದ್‌” ಕೃತಿಯಲ್ಲಿವೆ.

What's Your Reaction?

like

dislike

love

funny

angry

sad

wow